12/08/2020
*Aug 11, 2020, 10:30 AM*
*ಶಾಲಾ ಕಾಲೇಜು ತೆರೆಯಲು ರಾಜ್ಯ ಸರ್ಕಾರ ತುದಿಗಾಲಲ್ಲಿ ನಿಂತಿತ್ತು. ಆದರೆ ಕೇಂದ್ರ ಸರ್ಕಾರದ ನಿರ್ದೇಶನನಕ್ಕಾಗಿ ಕಾಯುತ್ತಿದ್ದ ಶಿಕ್ಷಣ ಸಚಿವ ಅವರಿಗೆ ಭಾರೀ ಹಿನ್ನಡೆಯಾಗಿದೆ*
*ಈ ವರ್ಷ ಶಾಲೆ ತೆರೆಯುವ ಆಲೋಚನೆಯೇ ಇಲ್ಲ ಎನ್ನುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟ ಮಾಡಿದೆ*
*ಆದರೆ ಪರೀಕ್ಷೆ ನಡೆಸಿ ಫಲಿತಾಂಶ ನೀಡುವುದಕ್ಕೆ ಯಾವುದೇ ಅಡ್ಡಿಯಿಲ್ಲ ಎಂದೂ ಕೂಡ ಘೋಷಿಸಿದೆ*
*2020-21ನೇ ಶೈಕ್ಷಣಿಕ ವರ್ಷವನ್ನು ಶೂನ್ಯ ವರ್ಷ ಎಂದು ಪರಿಗಣಿಸಲಾಗುವುದು. ಆದರೆ ವರ್ಷದ ಕೊನೆಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಶೈಕ್ಷಣಿಕ ಸಂಸ್ಥೆಗಳೂ ಕೂಡ ಪರೀಕ್ಷೆ ನಡೆಸಬೇಕಾಗುತ್ತದೆ ಎಂದಿದ್ದಾರೆ. ಅಂದರೆ ಮಕ್ಕಳು ಮನೆಯಲ್ಲೇ ಓದಿಕೊಂಡು ಹೋಗಿ ಪರೀಕ್ಷೆ ಬರೆಯುವುದು ಅನಿವಾರ್ಯ ಎನ್ನುವುದು ಕೇಂದ್ರ ಸರ್ಕಾರದ ನಿರ್ಧಾರದ ಹಿಂದಿನ ಉದ್ದೇಶ ಆಗಿದೆ*
*ಆನ್ಲೈನ್ ತರಗತಿ ನಡೆಸಲು ಯಾವುದೇ ಅಡ್ಡಿ ಇಲ್ಲ ಎಂದು ಕೋರ್ಟ್ ಹೇಳಿದ ಬಳಿಕ 1ನೇ ತರಗತಿ ಮಕ್ಕಳಿಂದ ಹಿಡಿದು ಪದವಿ ವಿದ್ಯಾರ್ಥಿಗಳಿಗೂ ಆನ್ಲೈನ್ ಮೂಲಕವೇ ತರಗತಿಗಳನ್ನು ನಡೆಸಲಾಗ್ತಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಹೊಸ ಮಾನದಂಡ ರೂಪಿಸಿದೆ*
*3ನೇ ತರಗತಿವರೆಗಿನ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಇರುವುದಿಲ್ಲ*
*4ನೇ ತರಗತಿಯಿಂದ 7ನೇ ತರಗತಿ ತನಕ ಕಡಿಮೆ ಪ್ರಮಾಣದಲ್ಲಿ ಆನ್ಲೈನ್ ಶಿಕ್ಷಣ ಇರಲಿದೆ ಎನ್ನಲಾಗಿದೆ*
*ಪ್ರೌಢಶಾಲೆಯ ಮಕ್ಕಳಿಗೆ ಅಂದರೆ 8ನೇ ತರಗತಿಯಿಂದ ಸಂಪೂರ್ಣ ಆನ್ಲೈನ್ ಶಿಕ್ಷಣ ವ್ಯವಸ್ಥೆ ಇರಲಿದೆ*
*ಕಾಲೇಜು ವಿದ್ಯಾರ್ಥಿಗೆ ಪ್ರಶ್ನಾಪತ್ರಿಕೆ ಸಂಗ್ರಹವನ್ನು ನೀಡಬೇಕು ಎನ್ನಲಾಗಿದೆ*
*ಇಂದು ನಡೆದ ಸಂಸದೀಯ ಸಮಿತಿ ಸಭೆಯಲ್ಲಿ ಇಷ್ಟು ಮಾಹಿತಿಗಳ ಬಗ್ಗೆ ಪ್ರಸ್ತಾವನೆ ಮಾಡಲಾಗಿದೆ. ತನ್ನ ಅಭಿಪ್ರಾಯ ತಿಳಿಸಿರುವ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಸಂಸದೀಯ ಸಮಿತಿ ರಾಜ್ಯಗಳ ಸಲಹೆ ಕೇಳಿ ಅಂತಿಮ ನಿರ್ಧಾರ ಪ್ರಕಟ ಮಾಡಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಳಿದ್ದು ಮಕ್ಕಳ ಹಿತದೃಷ್ಟಿಯಿಂದ ಶಾಲಾ ಕಾಲೇಜುಗಳನ್ನು ತೆರೆಯುವ ಯಾವ ನಿರ್ಧಾರವನ್ನೂ ಮಾಡಲಾಗಿಲ್ಲ ಎಂದಿದ್ದಾರೆ*
*ದಿನದಿಂದ ದಿನಕ್ಕೆ ಕರೋನಾ ಸೋಂಕು ದೇಶವ್ಯಾಪಿ ಹರಡುತ್ತಲೇ ಇದೆ. ಪ್ರತಿದಿನ ದೇಶದಲ್ಲಿ 60 ಸಾವಿರಕ್ಕೂ ಹೆಚ್ಚು ಮಂದಿ ಹೊಸದಾಗಿ ಸೋಂಕಿಗೆ ತುತ್ತಾಗುತ್ತಲೇ ಇದ್ದಾರೆ. ಒಮ್ಮೆ ಶಾಲಾ ಕಾಲೇಜುಗಳು ಆರಂಭವಾದ ಬಳಿಕ ಕೆಲವರಿಗೆ ಸೋಂಕು ತಗುಲಿದರೆ ನೂರಾರು ವಿದ್ಯಾರ್ಥಿಗಳು ಸೋಂಕಿಗೆ ತುತ್ತಾಗುವ ಸಾಧ್ಯತೆ ಇರಲಿದೆ. ಇದು ಮತ್ತಷ್ಟು ಸೋಂಕು ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಂತಾಗಿದೆ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನುತ್ತಿದ್ದಾರೆ ಶಿಕ್ಷಣ ತಜ್ಞರು*
*ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಅರ್ಥಾತ್ ಶಿಕ್ಷಣ ಸಚಿವಾಲಯ ಈಗಾಗಲೇ ಶೂನ್ಯ ವರ್ಷ ಎಂದು ಘೋಷಣೆ ಮಾಡುವ ನಿರ್ಧಾರ ಮಾಡಿದ್ದು, ಕೇಂದ್ರ ಸರ್ಕಾರದ ಎದುರು ಇಡಲಾಗಿದೆ. ಆದರೆ ರಾಜ್ಯಗಳ ನಿರ್ಧಾರವನ್ನು ಕೇಳಿಕೊಂಡು ಆ ಬಳಿಕ ಉನ್ನತ ಶಿಕ್ಷಣ ಇಲಾಖೆ, ಕೇಂದ್ರ ಗೃಹ ಇಲಾಖೆ ಜೊತೆಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಪ್ರಕಟ ಮಾಡಲಾಗುವುದು ಎಂದಿದ್ದಾರೆ. ಅಂದರೆ ದೇಶದಲ್ಲಿ ಸಾವಿರಾರು ಮಕ್ಕಳಿಗೆ ಕರೋನಾ ಸೋಂಕು ಬಂದರೆ ಚಿಕಿತ್ಸೆ ಕೊಡುವಷ್ಟು ಮೂಲಸೌಕರ್ಯ ಇದೆಯಾ..? ಶಿಕ್ಷಣ ವ್ಯವಸ್ಥೆಯಲ್ಲಿ ಏನು ಮಾಡಬೇಕು..? ಶೂನ್ಯ ವರ್ಷದಿಂದ ಆಗುವ ಅನಾನುಕೂಲಗಳು ಏನು ಎನ್ನುವ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ ಬಳಿಕ ಅಂತಿಮ ಅಧಿಸೂಚನೆ ಹೊರಬೀಳಲಿದೆ*