05/09/2023
INDIA ಬದಲಿಸಿ BHARAT ಅಂದಾಕ್ಷಣ ದೇಶಪ್ರೇಮ ಉಕ್ಕಿ ಹರಿಯಲು.. ವಾಟ್ಸಾಪ್ ಯೂನಿವರ್ಸಿಟಿ ಪದವೀಧರರಂತೆ ಇವರ
ತೌಡುಕುಟ್ಟುವ ಮಾತುಗಳಿಗೆ, ಒಂದು ಪಕ್ಷ/ ಸಂಘಟನೆ ಹೇಳಿದ್ದೇ ವೇದವಾಕ್ಯ ಅಂತ ಶಿರಸಾಪಾಲಿಸಲು 2014ರಲ್ಲಿ ಸ್ವಾತಂತ್ರ್ಯ ಬಂತು ಅಂತ ನಂಬಿರೋ ಮುಠ್ಠಾಳರು ನಾವಲ್ಲ.. ವೇದ, ಪುರಾಣ ಕಾಲದ ಬಗ್ಗೆ ಹೆಮ್ಮೆ ಗೌರವ ಇದ್ದರೂ ನಾವು ಕಣ್ಣಾರೆ ನೋಡಿಲ್ಲ.. ನಾವು ಜನ್ಮತಳೆದಂದಿನಿಂದ ಮೆಟ್ಟಿದ, ಮುಟ್ಟಿದ, ಹೆಮ್ಮೆ ಪಟ್ಟ, ರಕ್ಷಣೆ ಮಾಡಿದ, ಜೀವಿಸುತ್ತಿರುವ.. ಕೊನೆಗೆ ಉಸಿರು ಬಿಟ್ಟಾಗ ಮಣ್ಣಲ್ಲಿ ಮಣ್ಣಾಗುವ ಪುಣ್ಯಭೂಮಿ ಇದೇ ನಮ್ಮ ತಾಯ್ನಾಡು.. ಇದು ನಮ್ಮ ಹಿಂದೂಸ್ತಾನ್, ಹಿಂದ್ ಪ್ರಾಂತ್ಯ, ಭರತ ಭೂಮಿ, ಭರತವರ್ಷ, ಇಂಡಿಯಾ.. ಇದೇ ಆಡಳಿತ ಪಕ್ಷ ತನ್ನ ಹಿಂದಿನ ಮೈತ್ರಿ ಕೂಟದ ಹೆಸರು NDA ಯಲ್ಲಿ india ಅಂತ ಉಚ್ಛಾರ ಬಂದಿದ್ದನ್ನು ಗಮನಿಸಲಿಲ್ಲವೇ?? ಕಳೆದ ಒಂಭತ್ತು ವರ್ಷಗಳಲ್ಲಿ ತನ್ನ ಎಲ್ಲಾ ಯೋಜನೆ, ನೀತಿಗಳು, ಕಾರ್ಯಕ್ರಮಗಳಿಗೆ INDIA ಅಂತ ಹೆಸರಿಡುವಾಗ ಬುದ್ದಿ ಇರಲಿಲ್ಲವೇ?? ಆವಾಗ ಇಲ್ಲದ ಟೊಳ್ಳು ಕಾಳಜಿ ಈಗ ವಿಪಕ್ಷಗಳ ಕೂಟದ ಹೆಸರು I.N.D.I.A. ಅಂದಾಕ್ಷಣ ಇಷ್ಟು ಆತಂಕಗೊಂಡಿರುವುದೇಕೆ??
ಆಗಸ್ಟ್ 15ರ ಎರಡುಗಂಟೆ ಉದ್ದದ ತನ್ನ ತೊಡರು ಭಾಷಣದಲ್ಲಿ ಪ್ರಧಾನಿಗಳು ಒಮ್ಮೆಯೂ India ಅಂತ ಉಚ್ಚರಿಸದಿದ್ದಾಗಲೇ ಒಂದು ಸಣ್ಣ ಗುಮಾನಿ ಮೂಡಿತ್ತು..
ವಿಪಕ್ಷಗಳು ತೋಡಿದ ಖೆಡ್ಡಾಗೆ ಬಿದ್ದ ಆಡಳಿತ ಪಕ್ಷ ತನ್ನ ಸ್ವಸಾಮರ್ಥ್ಯದಿಂದ.. "ಮಾಡಿದೀವಿ" ಅಂತ ಹೇಳಿಕೊಳ್ಳುವ ಯಾವುದೇ ಸಾಧನೆ ಇಲ್ಲದಾದಾಗ.. ಸೋಲುವ ಭೀತಿಯಿಂದ.. ವಿರೋಧಾಭಾಸ ಮೂಡಿಸಿರುವ ಹಲವು ಹಗರಣ ಮತ್ತು ಪ್ರಕರಣಗಳಿಂದ ಕಂಗೆಟ್ಟು ಇಂತಹ ಎಡವಟ್ಟು ಮಾಡಿಕೊಳ್ಳುವುದು ಸಹಜ.. ಆದರೆ ಇದು ಭಾರತದ/ ಇಂಡಿಯಾದ 143+ ಕೋಟಿ ಪ್ರಜೆಗಳ (ಬಿಜೆಪಿ ಆರ್.ಎಸ್. ಎಸ್. ಸೇರಿದಂತೆ) ಪೌರತ್ವ ಮತ್ತು ದೇಶಪ್ರೇಮ ಪರೀಕ್ಷಿಸುವ ಹೊಸ ಕೆಡುಕಿನ ಯೋಜನೆಗೆ ದಾರಿ ಮಾಡಿಕೊಡಬಾರದಷ್ಟೇ..!! ಹಾಗಾದಲ್ಲಿ ಸಾಮಾಜಿಕ ವ್ಯವಸ್ಥೆ ತುಂಬಾ ಅಲ್ಲೋಲಕಲ್ಲೋಲವಾಗುತ್ತದೆ..
BHARAT
HIND
HINDUSTAN
INDIA
jai hind,
jai ho,
chak de India
long live india,
vande mataram,
bharath mata ki jai...
ಎಲ್ಲವೂ ನಮಗೆಲ್ಲರಿಗೂ ರೋಮಾಂಚನ ಗೊಳಿಸುವ ಭಾವವನ್ನೇ ಕೊಡುವುದು.. ಇದರಲ್ಲಿ ಹೊಸದಾಗಿ (ಅಂದರೆ ಈಗ) INDIA ಅಂದಾಕ್ಷಣ ಯಾರಿಗಾದರೂ ದೇಶಪ್ರೇಮ ಮೂಡುತ್ತಿಲ್ಲ, BHARAT ಅಂದರೆ ಮಾತ್ರ ದೇಶಭಕ್ತಿ ಉಂಟಾಗುತ್ತದೆ ಅಂದರೆ ಆ ವ್ಯಕ್ತಿ "ನೈಜ ಭಾರತೀಯ" ಆಗಲು ಸಾಧ್ಯವಿಲ್ಲ.. ಆ ವ್ಯಕ್ತಿ ಕೇವಲ ಮತ್ತು ಕೇವಲ ಆರ್.ಎಸ್.ಎಸ್. ಮನಃಸ್ಥಿತಿಯ ಬಿಜೆಪಿ ಪಕ್ಷದ ಬೆಂಬಲಿಗ ಅಷ್ಟೇ..
ಹೆಮ್ಮೆಯ Indian/ ಭಾರತೀಯ ಆಗ್ತೀರೋ.. ಒಂದು ಪಕ್ಷದ ಬೆಂಬಲಿಗ ಆಗಿ ನಕಲಿ ಹಿಂದು/ ನಕಲಿ ಭಾರತೀಯ ಆಗ್ತೀರೋ ನಿಮಗೆ ಬಿಟ್ಟಿದ್ದು..
Long live India.. 🇮🇳 I am proud Indian..